KANNADA BUSINESSMAN

ಎಲ್ಲರಿಗೂ ನಮಸ್ಕಾರ,

ನಾನು ಅಂಬಣ್ಣಾ , ನಿಮ್ಮ ಪ್ರೀತಿಯ kannada businessman ಪೇಜಿನ್ Admin. ನಮ್ಮದು ಬೆಳಗಾವಿ ಜಿಲ್ಲೆ, ನಾನು ಇವಾಗ ಸದ್ಯಕ್ಕೆ ನಮ್ಮೂರಲ್ಲಿನೆ ಒಂದು ಸಣ್ಣ ನೌಕರಿ ಮಾಡ್ತಾ ಈ ಪೇಜ್ ನಾ ನಡಿಸುತ್ತಾ  ಇದೀನಿ. ಇದು ನನ್ನ ಚಿಕ್ಕ intruduction

1. Kannada businessman ಪೇಜ್ ಹೇಗೆ ಶುರುವಾಯಿತು?

ನಮ್ಮ ಪೇಜೀನ ಬೆಳೆವಣಿಗೆಯನ್ನು ನೋಡಿ, ತುಂಬಾ ಜನರು ನಮಗೆ ಕೇಳಿರುವ ಪ್ರಶ್ನೆ ಅಂದ್ರೇ

ಹೇಗೆ ಶುರು ಮಾಡಿದ್ರಿ?

ಬನ್ನಿ ಹೇಳ್ತೀನಿ,
ನಾನು ನೌಕರಿ ಮಾಡ್ತೀರಬೇಕಾದರೆ, ನನಗೆ ಅನ್ಸಿದ್ದು, ನಾನು ಒಂದೇ ಆದಾಯದ ಮೂಲದ ( Income source) ಮೇಲೆ ಅವಲಂಬ ಆಗ್ಬಾರ್ದು ಅಂತಾ. ಹೀಗಿರಬೇಕಾದರೆ ನನ್ನ ತಲೆಯಲ್ಲಿ ಈ ಐಡಿಯಾ ಬಂತು, ಯಾಕೆ ನಾನು Instagram ಅಲ್ಲಿ ಒಂದು Theme page ನಾ create ಮಾಡಿ ದುಡ್ಡ ಮಾಡ್ಬಾರ್ದು ಅಂತಾ. ಆಗ ನಾನು ಈ kannada businessman ಪೇಜ್ ನಾ create ಮಾಡಿದೆ.

2. Business field ನ್ನೆ ಯಾಕೇ ಅಯ್ಕೆ ಮಾಡಿದೆ?

ಬನ್ನಿ ಹೇಳ್ತೀನಿ,
ನಾನು ಕಾಲೇಜಿಗೆ ಹೋಗ್ತಿರಬೇಕಾದ್ರೆ, ನನಗೇ ಒಂದು opportunity ಅಂತಾ ನನ್ನ ಗೆಳೆಯ Network Marketing ಅನ್ನೋ ಒಂದು xyz ಕಂಪನಿಯಲ್ಲಿ join ಮಾಡಿಸಿದ್ದ, ಅಲ್ಲಿ ನಾನು ನನ್ನ ಶಿಕ್ಷಣದ ಜೋತೆ ಒಂದೆರೆಡು ವರ್ಷ ಕೆಲಸ ಮಾಡಿದೆ, ಆ ಕಂಪನಿಯಲ್ಲಿ ನಾನು ಕೇವಲ 50K earning ಮಾಡಿದೆ ಮತ್ತು Business ಬಗ್ಗೆ ಸಾಕಷ್ಟು ಕಲಿತೆ. ಅದೇ knowledge ಮತ್ತು ಅನುಭವದಿಂದ ಈ Field ನ ಆಯ್ಕೆ ಮಾಡಿದೆ ಮತ್ತು Business ಬಗ್ಗೆ ರೀಸರ್ಚ್ ಮಾಡಿ, ನನಗೆ ಸಿಕ್ಕಿರೋ ಮಾಹಿತಿಯನ್ನು ನಿಮ್ಮಾವರೆಗೆ ತಲುಪಿಸಿದೆ. ನಿಮ್ಮ ಪ್ರೀತಿಯಿಂದ ಇವತ್ತು 140K+ Business Family ಆಗಿದೆ.
ಈ Page ಜೋತೆ ನಾನು ಇದೇ category ಯ ಮತ್ತೆರೆಡು ಪೇಜ್ ನಾ create ಮಾಡಿದೆ. ಅದ್ರಲ್ಲಿ ಒಂದು sale ಮಾಡಿದೆ ಮತ್ತು ಇನ್ನೊಂದು kannadaudyami ಅಂತಾ ಇದೇ.

ಇವಾಗ ಮೊನ್ನೆ ಮೊನ್ನೆ ನಾವು kannadaudyami.com ಅನ್ನೋ ಹೆಸರಿನಲ್ಲಿಈ website launch ಮಾಡಿದೀವಿ. ಯಾಕಂದ್ರೆ, ಯಾವುದೇ Startup ಬಗ್ಗೆ ಆಗ್ಲಿ, ಯಾವುದೇ Business ideas ಬಗ್ಗೆ ಆಗ್ಲಿ ಅಥವಾ Business Tips ಬಗ್ಗೆ ಆಗ್ಲಿ ನಿಮಗೇ ಸಂಪೂರ್ಣವಾಗಿ ಮಾಹಿತಿಯನ್ನು ಈ website ಮುಖಾಂತರ ಕೊಡುವುದಕ್ಕಾಗಿ ಶುರು ಮಾಡಿದೀವಿ.

ಈ ಪೇಜ್ ನ Mission :
ನಮ್ಮ Mission, ಒಂದು YouTube ಚಾನೆಲ್ create ಮಾಡಿ ಅದರಲ್ಲಿ ಕರ್ನಾಟಕದಲ್ಲಿರುವ ಪ್ರತಿಯೊಂದು Business ಬಗ್ಗೆ search ಮಾಡಿ, ಅಲ್ಲಿ ಹೋಗಿ, ಅವರು ಯಾವ ಯಾವ ರೀತಿಯಲ್ಲಿ ತಮ್ಮ Business ನಾ ನಡಿಸುತ್ತಿದ್ದಾರೆ ಎಂದು videos ಮುಕಾಂತರ ನಿಮ್ಮವರೆಗೇ ತಲುಪಿಸುವುದು.

Vision :
ನಮ್ಮ Vision, ಕರ್ನಾಟಕದಲ್ಲಿ ಜನರಿಗೆ ” ನೌಕರಿ ಹುಡುಕುವು mindset ಇಂದ ನಾವು ಬೇರೆಯವರಿಗೆ ಹೇಗೆ ನೌಕರಿ ಕೊಡಬಹುದು ” ಎಂಬ mindset create ಮಾಡುವುದು.

ಧನ್ಯವಾದಗಳು…….

Leave a Comment